ಐಡಿಬಿಐ ಬ್ಯಾಂಕ್‌ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ನೇಮಕ: ಅರ್ಜಿಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ
ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾವು ಎಸ್‌ಒ ಹುದ್ದೆಗಳ ಭರ್ತಿಗೆ ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ ಅರ್ಜಿಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅಲ್ಲದೇ ಆನ್‌ಲೈನ್ ಲಿಂಕ್ ಅನ್ನು ಬಿಡುಗಡೆ ಆಕ್ಟಿವೇಟ್ ಮಾಡಿದೆ. ಪದವಿ, ಸ್ನಾತಕೋತ್ತರ ಪದವಿ ಪಾಸ್ ಮಾಡಿದ ಅಭ್ಯರ್ಥಿಗಳು ಬ್ಯಾಂಕ್ ಹುದ್ದೆಗಳಲ್ಲಿ ಆಸಕ್ತಿ ಇದ್ದರೆ ಬೇಗ ಬೇಗ ಅರ್ಜಿ ಹಾಕಿರಿ.
ಐಡಿಬಿಐ ಬ್ಯಾಂಕ್ ಅಥವಾ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ 136 ಎಸ್‌ಒ (Specialist Officer) ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಪ್ರಕಟಿಸಿತ್ತು. ಇದೀಗ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪರಿಷ್ಕೃತ ವೇಳಾಪಟ್ಟಿಯೊಂದಿಗೆ, ಆನ್‌ಲೈನ್ ಲಿಂಕ್ ಬಿಡುಗಡೆ ಮಾಡಿದೆ. ಆಸಕ್ತರು ಹುದ್ದೆಗಳ ಕುರಿತು ಕೆಳಗಿನಂತೆ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿ.
ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳನ್ನು ಫೈನಾನ್ಸ್ ಅಂಡ್ ಅಕೌಂಟ್ಸ್ ಇಲಾಖೆ, ಕಾರ್ಪೋರೇಟ್ ಕ್ರೆಡಿಟ್, ಆಡಿಟ್ (ಇನ್ಫಾರ್ಮೇಶನ್ ಸಿಸ್ಟಮ್), ರಿಸ್ಕ್ ಮ್ಯಾನೇಜ್ಮೆಂಟ್, ಫ್ರಾಡ್ ರಿಸ್ಕ್ ಮ್ಯಾನೇಜ್ಮೆಂಟ್, ಕಾರ್ಪೋರೇಟ್ ಸ್ಟ್ರಾಟೆಜಿ ಅಂಡ್ ಪ್ಲಾನಿಂಗ್ ಡಿಪಾರ್ಟ್‌ಮೆಂಟ್, ಇನ್ಫಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ ಡಿಪಾರ್ಟ್‌ಮೆಂಟ್ ಮತ್ತು ಇತರೆ ವಿಭಾಗಗಳಲ್ಲಿ ನೇಮಕ ಮಾಡಲಿದೆ.
ಐಡಿಬಿಐ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ವಿವರ
ಮ್ಯಾನೇಜರ್ : 84
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್ : 46
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ : 06
ಅರ್ಜಿ ಸಲ್ಲಿಸಲು ಪರಿಷ್ಕೃತ ದಿನಾಂಕಗಳು
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 06-06-2023
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 20-06-2023
ಅರ್ಜಿ ತಿದ್ದುಪಡಿಗೆ ಕೊನೆ ದಿನಾಂಕ : 20-06-2023
ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 05-07-2023
ಅಪ್ಲಿಕೇಶನ್ ಸ್ವೀಕಾರಕ್ಕೆ ನಿಗಧಿತ ಹಳೆಯ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 01-06-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-06-2023
ಶೈಕ್ಷಣಿಕ ಅರ್ಹತೆಗಳು: ಪದವಿ / ಸ್ನಾತಕೋತ್ತರ ಪದವಿ ಉತ್ತೀರ್ಣ
ಹುದ್ದೆವಾರು ನಿಗಧಿತ ಕನಿಷ್ಠ ಹಾಗೂ ಗರಿಷ್ಠ ವಯಸ್ಸಿನ ಅರ್ಹತೆಗಳು
ಮ್ಯಾನೇಜರ್ (ಗ್ರೇಡ್ ಡಿ) : 35-45 ವರ್ಷ.
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್, ಗ್ರೇಡ್ ಸಿ : 28-40 ವರ್ಷ.
ಮ್ಯಾನೇಜರ್ : 25-35 ವರ್ಷ.
ಬೇಕಾದ ದಾಖಲೆ / ಮಾಹಿತಿಗಳು
ಆಧಾರ್ ಕಾರ್ಡ್ ನಂಬರ್
ವಿದ್ಯಾರ್ಹತೆ ದಾಖಲೆ / ಅಂಕಪಟ್ಟಿಗಳು
ಕಾರ್ಯಾನುಭವ ಪ್ರಮಾಣ ಪತ್ರಗಳು
ಇತರೆ
ಆಯ್ಕೆ ಪ್ರಕ್ರಿಯೆ / ವಿಧಾನ : ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
leave your comment