Preloader

Loading

image

ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ 806 ಹುದ್ದೆ ಭರ್ತಿ: ಅರ್ಜಿ ಆಹ್ವಾನ

ರಾಷ್ಟ್ರದಾದ್ಯಂತ ಖಾಲಿ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಭರ್ತಿಗೆ ಐಬಿಪಿಎಸ್ ಇತ್ತೀಚೆಗೆ ಅಧಿಸೂಚಿಸಿದೆ. ಈ ಹುದ್ದೆಗಳ ಪೈಕಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ 806 ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಜೂನ್ 21 ಕೊನೆ ದಿನವಾಗಿದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಇತ್ತೀಚೆಗೆ ದೇಶದಾದ್ಯಂತದ ರೀಜನಲ್ ರೂರಲ್ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿ, ಅರ್ಜಿ ಅಹ್ವಾನಿಸಿದೆ. ಒಟ್ಟು 8612 ಹುದ್ದೆಗಳ ಪೈಕಿ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹಾಗೂ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳಲ್ಲಿ 806 ಹುದ್ದೆಗಳಿವೆ. ಈ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ
ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹುದ್ದೆಗಳ ಸಂಖ್ಯೆ : 600
ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಹುದ್ದೆಗಳ ಸಂಖ್ಯೆ : 206

ಎರಡು ಬ್ಯಾಂಕ್‌ಗಳಿಂದ ಸೇರಿ ಆಫೀಸ್ ಅಸಿಸ್ಟಂಟ್ 450 ಹುದ್ದೆಗಳು, ಆಫೀಸರ್ ಸ್ಕೇಲ್-1 350 ಹುದ್ದೆಗಳು, ಲಾ ಆಫೀಸರ್ 4 ಹುದ್ದೆ, ಸಿಎ 2 ಹುದ್ದೆ ಇವೆ.

ಅರ್ಜಿ ಸಲ್ಲಿಸಲು ನಿಗಧಿತ ದಿನಾಂಕಗಳು
ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ: 01-06-2023
ಆನ್‌ಲೈನ್ ಅರ್ಜಿಗೆ ಕೊನೆ ದಿನಾಂಕ : 21-06-2023
ಪರೀಕ್ಷೆ ಪೂರ್ವಭಾವಿ ತರಬೇತಿ ದಿನಾಂಕ : ಜುಲೈ 17-22, 2023.
ಅಪ್ಲಿಕೇಶನ್‌ ಶುಲ್ಕ : ಎಸ್‌ಸಿ / ಎಸ್‌ಟಿ / PWD ಅಭ್ಯರ್ಥಿಗಳಿಗೆ ರೂ.175, ಇತರೆ ಅಭ್ಯರ್ಥಿಗಳಿಗೆ ರೂ.850.
ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ : ಆಗಸ್ಟ್‌ 2023
ಆನ್‌ಲೈನ್‌ ಪ್ರಿಲಿಮ್ಸ್‌ ಎಕ್ಸಾಮ್ ಫಲಿತಾಂಶ : ಆಗಸ್ಟ್‌ / ಸೆಪ್ಟೆಂಬರ್, 2023
ಮೇನ್ಸ್‌ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 2023

ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ : https://www.ibps.in/

ವಿದ್ಯಾರ್ಹತೆ
ಆಫೀಸ್ ಅಸಿಸ್ಟಂಟ್ / ಆಫೀಸರ್ ಸ್ಕೇಲ್‌-1 ಹುದ್ದೆಗೆ ಸ್ಥಳೀಯ ಭಾಷೆ ತಿಳಿದಿರಬೇಕು. ಕಂಪ್ಯೂಟರ್ ಬಳಕೆ ಅರಿವು ಇರಬೇಕು. ಯಾವುದೇ ಪದವಿ ಪಾಸ್ ಮಾಡಿರಬೇಕು.

ಆಫೀಸರ್ ಸ್ಕೇಲ್-2 ಹುದ್ದೆಗೆ ಪದವಿ ಜತೆಗೆ ಯಾವುದೇ ಬ್ಯಾಂಕ್‌ಗಳಲ್ಲಿ 2 ವರ್ಷ ಕಾರ್ಯಾನುಭವ ಹೊಂದಿರಬೇಕು.

ವಯಸ್ಸಿನ ಅರ್ಹತೆಗಳು
ಆಫೀಸ್ ಅಸಿಸ್ಟಂಟ್ : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ಮೀರಿರಬಾರದು.
ಆಫೀಸರ್ ಸ್ಕೇಲ್‌ – 2 : ಕನಿಷ್ಠ 21 ರಿಂದ ಗರಿಷ್ಠ 32 ವರ್ಷ ಮೀರಿರಬಾರದು.
ಆಫೀಸರ್ ಸ್ಕೇಲ್ -1 : ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ಮೀರಿರಬಾರದು.

ಅಭ್ಯರ್ಥಿಗಳು ಎಷ್ಟು ಹುದ್ದೆಗಳಿಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿರುತ್ತದೆ.

Officer Scale-1 – Apply Online
Officer Scale-2 & 3 – Apply Online
Office Assistant – Apply Online

ಅರ್ಜಿ ಶುಲ್ಕ ರೂ.850. SC / ST / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.175.

ನೇಮಕಾತಿ ವಿಧಾನ : ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಜತೆಗೆ, ಸಂದರ್ಶನ ಪ್ರಕ್ರಿಯೆ ನಡೆಸಲಾಗುತ್ತದೆ.

ಉದ್ಯೋಗ ವಿವರ

ಹುದ್ದೆಯ ಹೆಸರುಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ವಿವಿಧ ಸ್ಕೇಲ್‌ ಹುದ್ದೆಗಳು
ವಿವರಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ನೋಟಿಫಿಕೇಶನ್
ಪ್ರಕಟಣೆ ದಿನಾಂಕ2023-06-01
ಕೊನೆ ದಿನಾಂಕ2023-06-21
ಉದ್ಯೋಗ ವಿಧFull Time
ಉದ್ಯೋಗ ಕ್ಷೇತ್ರಗ್ರಾಮೀಣ ಬ್ಯಾಂಕ್‌ಗಳ ಉದ್ಯೋಗ
ವೇತನ ವಿವರINR 35000 to 90000 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ
ವಿದ್ಯಾರ್ಹತೆಪದವಿ / ಸ್ನಾತಕೋತ್ತರ ಪದವಿ
ಕಾರ್ಯಾನುಭವ0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ
ವೆಬ್‌ಸೈಟ್‌ ವಿಳಾಸhttps://ibps.in/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸಮುಂಬೈ
ಸ್ಥಳಮುಂಬೈ
ಪ್ರದೇಶಮಹಾರಾಷ್ಟ್ರ
ಅಂಚೆ ಸಂಖ್ಯೆ400101
ದೇಶIND

leave your comment


Your email address will not be published. Required fields are marked *

Uploading
Color SWITCHER