Preloader

mynoukri.com

image

10ನೇ ಕ್ಲಾಸ್ ಪಾಸಾದವರಿಗೆ ಇಸ್ರೋದಲ್ಲಿದೆ ಬಂಪರ್ ಉದ್ಯೋಗ- 63 ಸಾವಿರ ಸಂಬಳ

ಜೂನ್ 16, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಹಾಕಬೇಕು.

ISRO SAC Recruitment 2023: ಇಸ್ರೋ(ISRO) ಕೇಂದ್ರೀಕೃತ ನೇಮಕಾತಿ ಮಂಡಳಿ ( ISRO Centralized Recruitment Board)- ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಡ್ರೈವರ್, ಅಸಿಸ್ಟೆಂಟ್, ಕುಕ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 16, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಹಾಕಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಹಾಗೂ ಇಸ್ರೋದಲ್ಲಿ ಕೆಲಸ ಮಾಡಲು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಿ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ವಿದ್ಯಾರ್ಹತೆ:
ಇಸ್ರೋ(ISRO) ಕೇಂದ್ರೀಕೃತ ನೇಮಕಾತಿ ಮಂಡಳಿ ( ISRO Centralized Recruitment Board)- ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.


ಅಸಿಸ್ಟೆಂಟ್ (ರಾಜ್​ಭಾಷಾ)- ಪದವಿ
ಕುಕ್- ಎಸ್​ಎಸ್​ಎಲ್​ಸಿ/ 10ನೇ ತರಗತಿ ಉತ್ತೀರ್ಣ
ಲೈಟ್ ವೆಹಿಕಲ್ ಡ್ರೈವರ್ ‘A’- ಎಸ್​ಎಸ್​ಎಲ್​ಸಿ/ 10ನೇ ತರಗತಿ ಉತ್ತೀರ್ಣರಾಗಿರಬೇಕು. ಲೈಟ್ ವೆಹಿಕಲ್ ಡ್ರೈವರ್ ಆಗಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಕಡ್ಡಾಯವಾಗಿ ಮಾನ್ಯತೆ ಇರುವ ಡ್ರೈವಿಂಗ್ ಲೈಸೆನ್ಸ್​ ಹೊಂದಿರಬೇಕು.

ಉದ್ಯೋಗದ ಸ್ಥಳ:
ಇಸ್ರೋ(ISRO) ಕೇಂದ್ರೀಕೃತ ನೇಮಕಾತಿ ಮಂಡಳಿ ( ISRO Centralized Recruitment Board)- ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಗುಜರಾತ್​ನ ಅಹಮದಾಬಾದ್​​ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ವೇತನ:
ಇಸ್ರೋ(ISRO) ಕೇಂದ್ರೀಕೃತ ನೇಮಕಾತಿ ಮಂಡಳಿ ( ISRO Centralized Recruitment Board)- ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 19,900-81,100 ರೂ. ಸಂಬಳ ಕೊಡಲಾಗುತ್ತದೆ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 16, 2023.

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ (ರಾಜ್​ಭಾಷಾ)-1
ಕುಕ್- 2
ಲೈಟ್ ವೆಹಿಕಲ್ ಡ್ರೈವರ್ ‘A’- 6
ಒಟ್ಟು- 9 ಹುದ್ದೆಗಳು


ವಯೋಮಿತಿ:
ಅಸಿಸ್ಟೆಂಟ್ (ರಾಜ್​ಭಾಷಾ)-18 ರಿಂದ 28 ವರ್ಷ
ಕುಕ್- 18ರಿಂದ 35 ವರ್ಷ
ಲೈಟ್ ವೆಹಿಕಲ್ ಡ್ರೈವರ್ ‘A’- 18ರಿಂದ 35 ವರ್ಷ


ವೇತನ:
ಅಸಿಸ್ಟೆಂಟ್ (ರಾಜ್​ಭಾಷಾ)-ಮಾಸಿಕ ₹25,500-81,100
ಕುಕ್- ಮಾಸಿಕ ₹19,900-63,200
ಲೈಟ್ ವೆಹಿಕಲ್ ಡ್ರೈವರ್ ‘A’- ಮಾಸಿಕ ₹ 19,900-63,200


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

leave your comment


Your email address will not be published. Required fields are marked *

Uploading
Verified by ExactMetrics