ಚಾಮರಾಜನಗರದ ಯುವಕರಿಗೆ ಬಂಪರ್ ಜಾಬ್ ಆಫರ್, ನಾಳೆ ನೇರ ನೇಮಕಾತಿ ಉದ್ಯೋಗ ಮೇಳ
ಚಾಮರಾಜನಗರ: ಉದ್ಯೋಗ (Job) ಹುಡುಕಾಟದಲ್ಲಿರುವ ಹನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಯುವಜನತೆಗೆ ಕರ್ನಾಟಕ ಸರ್ಕಾರದಿಂದ (Govt) ಮತ್ತೊಂದು ಸುವರ್ಣಾವಕಾಶ ಒಲಿದುಬಂದಿದೆ. ಉದ್ಯೋಗಾಕಾಂಕ್ಷಿಗಳಿಗೆ ಒಂದೇ ವೇದಿಕೆಯಲ್ಲಿ ನೌಕರಿ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಹನೂರು ಪಟ್ಟಣದಲ್ಲಿ ನಾಳೆ (ಸೆ.29) ಬೃಹತ್ ಉದ್ಯೋಗ ಮೇಳವನ್ನು (Job Fair) ಆಯೋಜಿಸಲಾಗಿದೆ. ಕೆಲಸಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿ (Unemployed) ಯುವಕ-ಯುವತಿಯರಿಗೆ ಇದು ಸುವರ್ಣಾವಕಾಶವಾಗಿದ್ದು, ಈ ಮೇಳದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಉದ್ಯೋಗ ಮೇಳ ಇದೇ ರೀತಿಯ ಸುದ್ದಿಗಳಿಗೆ ಇಲ್ಲಿ ಮಾಡಿ
ಕರ್ನಾಟಕ ಸರ್ಕಾರದ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (ಚಾಮರಾಜನಗರ) ವತಿಯಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಹನೂರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಹನೂರು ತಾಲೂಕು ಪಂಚಾಯಿತಿ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯವು ಕೈಜೋಡಿಸಿವೆ.
ಮೇಳದ ವಿಶೇಷತೆಗಳೇನು?
ಈ ಉದ್ಯೋಗ ಮೇಳದಲ್ಲಿ ವಿವಿಧ ಪ್ರತಿಷ್ಠಿತ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ನೇರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ವಿವಿಧ ವಿದ್ಯಾರ್ಹತೆ ಹೊಂದಿರುವ ಯುವಕರು ಒಂದೇ ಸೂರಿನಡಿ ನಾನಾ ಕಂಪನಿಗಳ ಸಂದರ್ಶನ ಎದುರಿಸಲು ಮತ್ತು ಉದ್ಯೋಗದಾತರೊಂದಿಗೆ ನೇರವಾಗಿ ಸಂವಾದ ನಡೆಸಲು ಇದು ಅತ್ಯುತ್ತಮ ಅವಕಾಶವಾಗಿದೆ.
ಭಾಗವಹಿಸಲು ಬೇಕಾಗುವ ಅಗತ್ಯ ದಾಖಲೆಗಳು
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಜೊತೆಯಲ್ಲಿ ಕೊಂಡೊಯ್ಯಬೇಕು.
- ಇತ್ತೀಚಿನ ರೆಸ್ಯೂಮ್ ಅಥವಾ ಬಯೋಡೇಟಾ
- ಶೈಕ್ಷಣಿಕ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳು
- ಆಧಾರ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿ
- ಪಾಸ್ಪೆÇೀರ್ಟ್ ಸೈಜ್ ಭಾವಚಿತ್ರಗಳು
ನಡೆಯುವ ಸ್ಥಳ ಹಾಗೂ ಸಮಯ
ದಿನಾಂಕ: ಸೆಪ್ಟೆಂಬರ್ 29 (ನಾಳೆ)
ಸಮಯ: ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ
ಸ್ಥಳ: ಹನೂರಿನ ಶ್ರೀ ಜಿ.ವಿ. ಗಾಡ್ ಸ್ನಾತಕ ಪದವಿ ದರ್ಜೆ ಕಾಲೇಜು.
ಹನೂರು ಹಾಗೂ ಇದರ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ನಿರುದ್ಯೋಗಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಬೃಹತ್ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಂಡು ತಮ್ಮ ವೃತ್ತಿಜೀವನಕ್ಕೆ ಭದ್ರುನೇವ ಹಾಕಿಕೊಳ್ಳುವಂತೆ ಸಂಘಟಕರು ಕೋರಿದ್ದಾರೆ.