Preloader

Loading

image

VIMS ಬಳ್ಳಾರಿಯಲ್ಲಿ 93 ಹುದ್ದೆಗಳಿಗೆ ಅರ್ಜಿ ಆಹ್ವಾನ- ಬೇಗ ಅಪ್ಲೈ ಮಾಡಿ

VIMS Bellary Recruitment 2023: ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿಯು (Vijayanagar Institute of Medical Sciences Bellary) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 93 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಮೆಡಿಕಲ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ (Application) ಸಲ್ಲಿಸಬಹುದು. ಜೂನ್ 19, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ (Last Date). ಆಸಕ್ತರು ತಡಮಾಡದೇ ಆಫ್​ಲೈನ್​/ ಪೋಸ್ಟ್ ಮೂಲಕ ಅಪ್ಲೈ ಮಾಡಿ. ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೊಚ್ಚಿನ್ ಶಿಪ್​ಯಾರ್ಡ್​ ಲಿಮಿಟೆಡ್
ಹುದ್ದೆಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಮೆಡಿಕಲ್ ಆಫೀಸರ್
ಒಟ್ಟು ಹುದ್ದೆ93
ವಿದ್ಯಾರ್ಹತೆಎಂಬಿಬಿಎಸ್, ಡಿಎನ್​ಬಿ
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಬಳ್ಳಾರಿ
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್ 19, 2023

ಹುದ್ದೆಯ ಮಾಹಿತಿ:
ಪ್ರೊಫೆಸರ್- 7
ಅಸೋಸಿಯೇಟ್ ಪ್ರೊಫೆಸರ್- 23
ಮೆಡಿಕಲ್ ಆಫೀಸರ್- 57
ಕಾಸಲ್ಟಿ ಮೆಡಿಕಲ್ ಆಫೀಸರ್- 6

ವಿದ್ಯಾರ್ಹತೆ:
ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಬಿಎಸ್, ಡಿಎನ್​ಬಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಪ್ರೊಫೆಸರ್- 50 ವರ್ಷ
ಅಸೋಸಿಯೇಟ್ ಪ್ರೊಫೆಸರ್- 45 ವರ್ಷ
ಮೆಡಿಕಲ್ ಆಫೀಸರ್- 38 ವರ್ಷ
ಕಾಸಲ್ಟಿ ಮೆಡಿಕಲ್ ಆಫೀಸರ್- ನಿಗದಿಪಡಿಸಿಲ್ಲ.


ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಒಬಿಸಿ ಅಭ್ಯರ್ಥಿಗಳು- 3 ವರ್ಷ

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 2000 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್​


ವೇತನ:
ನಿಗದಿಪಡಿಸಿಲ್ಲ.


ಉದ್ಯೋಗದ ಸ್ಥಳ:
ಬಳ್ಳಾರಿ


ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಅನುಭವ
ಪಠ್ಯೇತರ ಚಟುವಟಿಕೆಗಳು
NCC ಅಥವಾ NSS ಗ್ರೇಡ್ ಪ್ರಮಾಣಪತ್ರ
ಸಂದರ್ಶನದಲ್ಲಿ ವ್ಯಕ್ತಿತ್ವ/ಪ್ರಸ್ತುತಿ


ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ನಿರ್ದೇಶಕರ ಕಛೇರಿ
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ
ವಿಮ್ಸ್ ಕ್ಯಾಂಪಸ್
ಕಂಟೋನ್ಮೆಂಟ್
ಬಳ್ಳಾರಿ-583104

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/06/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 19, 2023
ಸಂದರ್ಶನ ನಡೆಯುವ ದಿನ: ಜೂನ್ 22, 2023 ಬೆಳಗ್ಗೆ 11 ಗಂಟೆಗೆ


ಸಂದರ್ಶನ ನಡೆಯುವ ಸ್ಥಳ
ನಿರ್ದೇಶಕರು
ವಿಮ್ಸ್ ಆಡಳಿತ ಕಚೇರಿ
ಬಳ್ಳಾರಿ
ಕರ್ನಾಟಕ

leave your comment


Your email address will not be published. Required fields are marked *

Uploading
Color SWITCHER